ನಮ್ಮ ಪರಿಸರ
ಮೊದಲು ನಾವು ಪರಿಸರ ಎಂದರೇನು ಎಂದು ತಿಳಿದುಕೊಳ್ಳೋಣ.
****************************************************
ಪರಿಸರದ ವ್ಯಾಖ್ಯೆ :ನಮ್ಮ ಸುತ್ತಮುತ್ತಲು ಕಂಡುಬರುವ ಜೈವಿಕ & ಅಜೈವಿಕ ಘಟಕಗಳನ್ನು ಅಭ್ಯಸಿಸುವ ವಿಜ್ಞಾನದ ಒಂದು ಶಾಖೆಯನ್ನು ಪರಿಸರ ಎನ್ನುವರು.
******************************************************
ಪರಿಸರದ ಘಟಕಗಳು
ಪರಿಸರದಲ್ಲಿ ಬಹು ಮುಖ್ಯವಾಗಿ ಎರಡು ಘಟಕಗಳು ಕಂಡುಬರುತ್ತವೆ.ಅವುಗಳು ಈ ಕೆಳಗೆನಂತಿದೆ.
1.ಜೈವಿಕ ಘಟಕಗಳು
2.ಅಜೈವಿಕ ಘಟಕಗಳು
ಈಗ ನಾವು ಮೊದಲು ಜೈವಿಕ ಘಟಕಗಳ ಬಗ್ಗೆ ತಿಳಿದುಕೋಳ್ಳೊಣ.
****************************************************
1.ಜೈವಿಕ ಘಟಕಗಳು
ಪರಿಸರದಲ್ಲಿ ಕಂಡುಬರುವ ಜೀವ ಇರುವ ಘಟಕಗಳನ್ನು ಜೈವಿಕ ಘಟಕಗಳುಎನ್ನುವರು.ಉದಾ: ಸಸ್ಯಗಳು,ಪ್ರಾಣಿಗಳು ಇತ್ಯಾದಿ.
***************************************************
2.ಅಜೈವಿಕ ಘಟಕಗಳು
ಪರಿಸರದಲ್ಲಿ ಕಂಡುಬರುವ ಜೀವ ಇಲ್ಲದ ಘಟಕಗಳನ್ನು ಅಜೈವಿಕ ಘಟಕಗಳು ಎನ್ನುವರು.ಉದಾ:ಕಲ್ಲು,ಮಣ್ಣು,ನೀರು,ಗಾಳಿ ಇತ್ಯಾದಿ.
*****************************************************
ಪರಿಸರ ವ್ಯವಸ್ಥೆ
ಒಂದು ಪರಿಸರದಲ್ಲಿ ಜೈವಿಕ ಘಟಕಗಳು & ಅಜೈವಿಕ ಘಟಕಗಳು ಜೊತೆಗೂಡಿ ಪರಸ್ಪರ ಕಾರ್ಯನಿರ್ವಹಿಸುವುದನ್ನು ಪರಿಸರ ವ್ಯವಸ್ಥೆ ಎನ್ನುವರು.
************************************************
ಪರಿಸರ ವ್ಯವಸ್ಥೆಯ ಪ್ರಕಾರಗಳು
1)ನೈಸರ್ಗಿಕ ಪರಿಸರ ವ್ಯವಸ್ಥೆ
2)ಕೃತಕ(ಮಾನವ ನಿರ್ಮಿತ )ಪರಿಸರ ವ್ಯವಸ್ಥೆ.
*************************************
1.ನೈಸರ್ಗಿಕ ಪರಿಸರ ವ್ಯವಸ್ಥೆ
ನಿಸರ್ಗದಲ್ಲಿ ತನ್ನಿಂತಾನಾಗಿ ಉಂಟಾಗಿರುವ ಪರಿಸರ ವ್ಯವಸ್ಥೆಯನ್ನು ನೈಸರ್ಗಿಕ ಪರಿಸರ ವ್ಯವಸ್ಥೆ ಎನ್ನುವರು.ಉದಾ:ಕಾಡು,ಸಮುದ್ರ ಇತ್ಯಾದಿ.
*************************************************
2.ಕೃತಕ ಪರಿಸರ ವ್ಯವಸ್ಥೆ
ಮಾನುಷ್ಯರು ನಿರ್ಮಿಸಿದ ಪರಿಸರ ವ್ಯವಸ್ಥೆಯನನ್ನು ಕೃತಕ ಪರಿಸರ ವ್ಯವಸ್ಥೆ ಎನ್ನುವರು.ಉದಾ: ಹೊಲ,ಕೃಷಿ,ಮತ್ಸ್ಯಾಗಾರ,ಇತ್ಯಾದಿ.
************************************************
ಪರಿಸರ ವ್ಯವಸ್ಥೆಯ ಘಟಕಗಳು
1.ಉತ್ಪಾದಕರು 2.ಭಕ್ಷಕರು 3.ವಿಘಟಕಗಳು
************************************
ಉತ್ಪಾದಕರು ಉತ್ಪಾದಿಸಿದ ಆಹಾರವನ್ನು ನೇರವಾಗಿ ಅಥವಾ ಇತರ ಭಕ್ಷಕ ಜೀವಿಗಳನ್ನು ಪರೋಕ್ಷವಾಗಿ ಸೇವಿಸುವ ಜೀವಿಗಳೇ ಭಕ್ಷಕರು. ಉದಾ:ಕುರಿ(ನೇರವಾಗಿ),ಹುಲಿ(ಪರೋಕ್ಷವಾಗಿ).
*******************************************************
3.ವಿಘಟಕಗಳು
![]() |
ಅಣಬೆ |
![]() | |
ಬ್ಯಾಕ್ಟೀರಿಯಾ |
![]() | |||
ಬ್ರೆಡ್ ಮೌಲ್ಡ್ |
ಕೆಲವು ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರ ದಂತಹ ಸೂಕ್ಷ್ಮ ಜೀವಿಗಳು ಸತ್ತ ಜೀವಿಯ ಅವಶೇಷ & ತ್ಯಾಜ್ಯಗಳನ್ನು ವಿಘಟಿಸಿ ,ಸಂಕೀರ್ಣ ಸಾವಯವ ಪದಾರ್ಥಗಳನ್ನು ಸರಳ ನಿರವಯವ ಪದಾರ್ಥಗಳನ್ನಾಗಿ ವಿಘಟಿಸುವುದರಿಂದ ಅವುಗಳನ್ನು ವಿಘಟಕಗಳು ಎನ್ನುವರು.
******************************************************
ಆಹಾರ ಸರಪಳಿ
ವ್ಯಾಖ್ಯೆ:ಒಂದು ಪೋಷಣಾಸ್ತರದಿಂದ ಇನ್ನೊಂದು ಪೊಷಣಾಸ್ತರಕ್ಕೆ ಆಹಾರ & ಶಕ್ತಿಯ ವರ್ಗಾವಣೆಯನ್ನು ಆಹಾರ ಸರಪಳಿ ಎನ್ನುವರು.
******************************************************
ಪೋಷಣಾಸ್ತರ
ಒಂದು ಆಹಾರ ಸರಪಳಿಯಲ್ಲಿ ಪ್ರತಿಯೊಂದು ಹಂತವು ಪೋಷಣಾಸ್ತರ ರೂಪಿಸುತ್ತದೆ. ಉದಾಹರಣೆಗಳಿಗೆ ಈ ಕೆಳಗಿನವುಗಳನ್ನು ಗಮನಿಸಿ.
ಉತ್ಪಾದಕರು---->ಪ್ರಾ.ಭ.----->ದ್ವಿ.ಭ.------>ತೃ.ಭ.---->ಚ.ಭ.
ಪೋಷಣಾಸ್ತರ-1 : ಉತ್ಪಾದಕರು
ಈ ಪೋಷಣಾಸ್ತರದಲ್ಲಿ ಸ್ವಪೋಷಕ ಜೀವಿಗಳು ಒಳಗೊಂಡಿರುತ್ತದೆ.ಎಲ್ಲಾ ಹಸಿರು ಸಸ್ಯಗಳು ಉತ್ಪಾದಕರು.ಹಸಿರು ಸಸ್ಯಗಳು ಸೂರ್ಯನ ಬೆಳಕನ್ನು ಸ್ಥಿರೀಕರಣಗಳಿಸಿ ದ್ಯುತಿಸಂಶ್ಲೇಷಣೆಯ ಮೂಲಕ ತಮ್ಮ ಆಹಾರ ತಾವೇ ತಯಾರಿಸುತ್ತವೆ.
*************************************************
ಈ ಪೋಷಣಾಸ್ತರವು ಎಲ್ಲಾ ಸಸ್ಯಹಾರಿ ಪ್ರಾಣಿಗಳನ್ನು ಒಳಗೊಂಡಿರುತ್ತವೆ.ಎಲ್ಲಾ ಸಸ್ಯಹಾರಿ ಪ್ರಾಣಿಗಳು ಪ್ರಾಥಮಿಕ ಭಕ್ಷಕರು.ಈ ಪ್ರಾಣಿಗಳು ಸಸ್ಯಗಳು ಉತ್ಪಾದಿಸಿದ ಆಹಾರದ ಮೇಲೆ ಅವಲಂಬನೆ ಇರುತ್ತವೆ.
*****************************************************
ಪೋಷಣಾಸ್ತರ-3 ದ್ವಿತೀಯಕ ಭಕ್ಷಕರು ಪೋಷಣಾಸ್ತರ-3 ಚತುರ್ಥಕ ಭಕ್ಷಕರು
ಈ ಪೋಷಣಾಸ್ತರವು ಎಲ್ಲ ಮಾಂಸಾಹಾರಿ ಪ್ರಾಣಿಗಳನ್ನು ಸೇವಿಸುವ ಜೀವಿಗಳಾದ ಹದ್ದು ಪ್ರಾಣಿ ಇರುತ್ತದೆ.
****************************************************
ಆಹಾರ ಜಾಲ
ಹಲವು ಆಹಾರ ಸರಪಳಿಗಳನ್ನು ಒಳಗೊಂಡಿರುವ ಘಟಕವನ್ನು ಆಹಾರ ಜಾಲ ಎನ್ನುವರು.
*******************************************************
ಒಂದು ಆಹಾರ ಸರಪಳಿಯಲ್ಲಿ ಪ್ರತಿ ಪೋಷಣಾ ಸ್ತರಕ್ಕೆ ಶಕ್ತಿಯ ಏಕ ಮುಖ ಹರಿವನ್ನು ಶಕ್ತಿ ಸಂಚಾರ ಎನ್ನುತ್ತಾರೆ .
ನೆನಪಿರಲಿ: ಒಂದು ರೂಪದ ಶಕ್ತಿಯು ಇನ್ನೊಂದು ರೂಪಕ್ಕೆ ಬದಲಾಗುವಾಗ ಸ್ವಲ್ಪ ಪ್ರಮಾಣದ ಶಕ್ತಿಯು ಮತ್ತೆ ಬಳಸಲಾಗದ ಸ್ವರೂಪಗಳಲ್ಲಿ ಪರಿಸರದಲ್ಲಿ ಕಳೆದುಹೋಗುತ್ತದೆ.
*******************************************************
ಪರಿಸರದ ವಿವಿಧ ಘಟಕಗಳ ನಡುವೆ ಶಕ್ತಿಯ ಹರಿವು .
1}ಭೂ-ಪರಿಸರ ವ್ಯವಸ್ಥೆಯಲ್ಲಿನ ಎಲ್ಲ ಹಸೀರು ಸಸ್ಯಗಳು ತಮ್ಮ ಎಲೆಗಳ ಮೇಲೆ ಬೀಳುವ ಸೌರ ಬೆಳಕಿನ ಪ್ರಮಾಣದಲ್ಲಿ ಕೇವಲ ಶೇ . 1 ರಷ್ಟನ್ನು ಸೆರೆಹಿಡಿಡಿಯುತ್ತದೆ ಮತ್ತು ಆಹಾರ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ.
2} i)ಹಸಿರು ಸಸ್ಯಗಳನ್ನು ಪ್ರಾಥಮಿಕ ಭಕ್ಷಕರು ಸೇವಿಸಿದಾಗ ಹೆಚ್ಚಿನ ಪ್ರಮಾಣದ ಶಕ್ತಿಯು ಶಾಖವಾಗಿ ಪರಿಸರದಲ್ಲಿ ಕಳೆದುಹೋಗುತ್ತದೆ.
ii)ಸ್ವಲ್ಪ ಪ್ರಮಾಣದ ಶಕ್ತಿಯು ಜೀರ್ಣಕ್ರಿಯೆಗೆ-->ಕೆಲಸ ಮಾಡಲು--------->ಬೆಳವಣಿಗೆ------->ಸಂತಾನೋತ್ಪತ್ತಿಗೆ ಬಳಕೆಯಾಗುತ್ತದೆ.
iii)ಇನ್ನುಳಿದ ಆಹಾರದ ಸರಾಸರಿ ಶೇ. 10 ರಷ್ಟು ಭಾಗವು ತನ್ನದೇ ದೇಹಕನವಾಗಿ ಮಾರ್ಪಾಟಾಗುತ್ತದೆ & ಮುಂದಿನ ಹಂತದ ಭಕ್ಷಕರಿಗೆ ಲಭ್ಯವಾಗುತ್ತದೆ.
*******************************************************
ಶಕ್ತಿ ಹರಿವಿನ ವಿಶೇಷತೆ
1)ಶಕ್ತಿಯ ಹರಿವು ಏಕಮುಖ ವಾಗಿದೆ. ಶಕ್ತಿಯು ಹಿಂದಿನ ಪೋಷಣಾಸ್ತರಕ್ಕೆ ಹಿಂದಿರುಗುವುದಿಲ್ಲ .
2)ಪ್ರತಿಯೊಂದು ಪೋಷಣಾಸ್ತರದಲ್ಲಿ ಲಭ್ಯವಿರುವ ಶಕ್ತಿಯು ಪ್ರತಿ ಹಂತದಲ್ಲಿ ಶಕ್ತಿಯು ನಷ್ಟದಿಂದಾಗಿ ಕ್ರಮೇಣ
ಕಡಿಮೆಯಾಗುತ್ತದೆ.
****************************************
ಜೈವಿಕ ಸಂವರ್ಧನೆ
ನಾವು ಬೆಳೆಗಳನ್ನು ರೋಗಗಳಿಂದ ಮತ್ತು ಕೀಟಗಳಿಂದ ರಕ್ಷಿಸಲು ಬಳಸುವ ರಾಸಾಯನಿಕಗಳು ಆಹಾರ ಸರಪಳಿಯ ಮೂಲಕ ನಮ್ಮ ದೇಹದಲ್ಲಿ ಗರಿಷ್ಟ ಸಾಂಧ್ರತೆಯಲ್ಲಿ ಸಂಗ್ರಹವಾಗುತ್ತದೆ. ಈ ವಿದ್ಯಮಾನವನ್ನು ಜೈವಿಕ ಸಂವರ್ಧನೆ ಎನ್ನುವರು.
ಈ ರಾಸಾಯನಿಕಗಳನ್ನು ಯಾವುದೇ ವಿಧಾನಗಳ ಮುಲಕ ತೆಗೆಯಲು ಸಾಧ್ಯವಿಲ್ಲ .
*******************************************************
*ನಮ್ಮ ಚಟುವಟಿಕೆಗಳಿಂದ ಪರಿಸರದ ಮೇಲೆ ಬೀರುವ ಪರಿಣಾಮ
1)ಓಜೋನ್ ಪದರ ಶಿಥಿಲಗೊಳ್ಳುವಿಕೆ .
2)ನಾವು ಉತ್ಪಾದಿಸಿದ ತ್ಯಾಜ್ಯಗಳ ನಿರ್ವಹಣೆ
****************************************
1)ಓಜೋನ್ ಪದರ ಶಿಥಿಲಗೊಳ್ಳುವಿಕೆ
*ಓಜೋನ್ ಎಂಬುದು ಆಕ್ಸಿಜನ್ ನ ಮೂರೂ ಪರಮಾಣುಗಳಿಂದ ರೂಪುಗೊಂಡ ಒಂದು ಅಣುವಾಗಿದೆ.
*ಒಝಾನ ಒಂದು ಪ್ರಾಣಾಂತಿಕ ವಿಷವಾಗಿದೆ.
*ಓಜೋನ ಪದರವು ಸೌರಬೆಳಕಿನಿಂದ ಬರುವ ನೇರಳಾತೀತ ವಿಕಿರಣದಿಂದ ಭೂಮಿಯ ಮೇಲ್ಮೈಯನ್ನು ರಕ್ಷಿಸುತ್ತದೆ. ಇದು ಮಾನವರಲ್ಲಿ ಚರ್ಮದ ಕ್ಯಾನ್ಸರ್ ಉಂಟು ಮಾಡುತ್ತದೆ .
****************************************
ಓಜೋನ್ ರೂಪುಗೊಳ್ಳುವುದು ಹೇಗೆ?
ವಿದಿಯೋಗಾಗಿ ಈ ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡಿ
ಹೆಚ್ಚಿನ ತೀವ್ರತೆಯ ನೇರಳಾತೀತ ವಿಕಿರಣಗಳು ಕೆಲವು ಆಕ್ಸಿಜನ್ ಅಣುಗಳನ್ನು (O2), ಆಕ್ಸ್ಸಿಜನ್ ಪರಮಾಣು(O)ಗಳಾಗಿ ವಿಭಜಿಸುತ್ತದೆ. ನಂತರ ಈ ಪರಮಾಣುಗಳು ಇತರ ಆಕ್ಸಿಜನ್ ಅಣುಗಳೊಂದಿಗೆ ಸೇರಿ ಓಜೋನ್ ರೂಪುಗೊಳ್ಳುತ್ತದೆ.
*******************************************************
ಓಜೋನ್ ಶಿಥಿಲೀಕರಣಕ್ಕೆ ಕಾರಣಗಳು
ಶೀತಲೀಕರಣ ಮತ್ತು ಅಗ್ನಿಶಾಮಕದಲ್ಲಿ ಬಳಸಲ್ಪಡುವ ಕ್ಲೋರೋಫ್ಲೋರೋಕಾರ್ಬನ್ (CFCs) ಗಳಂಥ ಸಂಶ್ಲೇಷಿತ ರಾಸಾಯನಿಕಗಳು ಓಜೋನ್ ಪದರಕ್ಕೆ ಕುಸಿಯಲು ಕಾರಣವಾಗಿದೆ .
*******************************************************
2)ನಾವು ಉತ್ಪಾದಿಸಿದ ತ್ಯಾಜ್ಯಗಳ ನಿರ್ವಹಣೆ
i)ನಾವು ಬಳಸುವ ಜೈವಿಕ ವಿಘಟನೆಗೆ ಒಳಗಾಗದ ವಸ್ತುಗಳು ಪರಿಸರದಲ್ಲಿ ದೀರ್ಘಕಾಲದವರೆಗೆ ಹಾಗೆಯೇ ಉಳಿದುಬಿಡಬಹುದು ಹಾಗು ಅನೇಕ ಜೀವಿಗಳಿಗೆ ಹಾನಿಯುಂ ಟುಮಾಡಬಹುದು.
ii)ಬಳಸಿಬಿಸಾಡುವ ವಸ್ತುಗಳ ಅಧಿಕ ಬಳಕೆಯಿಂದ ಹಾಗು ಪ್ಯಾಕೇಜಿಂಗ್ ಆಹಾರ ಸೇವಿಸುವುದರಿಂದ ಜೈವಿಕ ವಿಘಟನೆಗೆ ಒಳಗಾಗದ ತ್ಯಾಜ್ಯವಸ್ತುಗಳನ್ನಾಗಿ ಉಂಟಾಗುತ್ತದೆ.
******************************************************
ಮಾರ್ಗೋಪಾಯಗಳು
ಜೈವಿಕ ವಿಘಟನೆಗೆ ಒಳಗಾಗುವ ಪೇಪರದಿಂದ ಮಾಡಲಾದ ವಸ್ತುಗಳನ್ನು ನಮ್ಮ ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳಬೇಕು.
******************************************************
Kavya
ReplyDeleteNo
ReplyDeleteSupper
ReplyDelete